ಯಾವುದೇ ಸೂಪರ್‌ಮಾರ್ಕೆಟ್ ಅಥವಾ ಪ್ರಸಿದ್ಧ ಕೆಫೆಗೆ ಇಂದು ನೀವು ತೆರಳಿದರೆ ಹಲವು ಬಗೆಯ ವಿಂಗಡಿಸಿದ ಕಾಫಿಗಳನ್ನು ಆಯ್ಕೆ ಮಾಡಿಕೊಳ್ಳಲು ನೀವು ನೋಡಬಹುದು. ಬಹುಸಂಖ್ಯೆಯ ಹುರಿದಿರುವ ಪ್ರಕಾರಗಳು, ಬಗೆಬಗೆಯ, ಮಿಶ್ರಣಗಳು, ರುಚಿಗಳು, ಪುಡಿಯಾದ, ಸಿದ್ಧವಾಗಿರುವ ಹಾಗೂ ಬೆಲೆಗಳಲ್ಲಿಯೂ ವ್ಯತ್ಯಾಸ ಕಾಣಬಹುದು... ವಾಹ್!

ಕಾಫಿಯ ಪ್ರಕಾರವು ಪ್ರತ್ಯೇಕ ವ್ಯಕ್ತಿಯ ಆದ್ಯತೆ ಮತ್ತು ರುಚಿಗೆ ಆಧಾರವಾಗಿದೆ. ಮತ್ತು ಪ್ರಪಂಚದಾದ್ಯಂತ ಇದು ವಿಭಿನ್ನವಾಗಿದೆ, ಸ್ಥಳೀಯ ಸಂಸ್ಕೃತಿಗಳೊಂದಿಗೆ ಮಿಳಿತವಾಗಿ ಇಂದಿನ ದೈನಂದಿನ ಅಭ್ಯಾಸವಾಗಿದೆ. ಪ್ರತಿ ನಿತ್ಯ ಪ್ರಪಂಚದಾದ್ಯಂತ ಲಕ್ಷಗಟ್ಟಲೆ ಜನರು ಸವಿಯುವಂತಹ ಹಲವು ಬಗೆಯ ಕಾಫಿ ಸಂಪ್ರದಾಯಗಳು ಇಲ್ಲಿ ಕೆಲವು ಇವೆ.

ಎಸ್‌ಪ್ರೆಸ್ಸೋ
ಪ್ರಪಂಚದಾದ್ಯಂತ ಮೆಚ್ಚಿನದು, ಈ ಸ್ಟ್ರಾಂಗ್ ಕಪ್ಪು ಕಾಫಿಯನ್ನು ಸಾಮಾನ್ಯವಾಗಿ ಎಸ್‌ಪ್ರೆಸ್ಸೋ ಮೆಷಿನ್‌ನಲ್ಲಿ ಕಪ್ಪಗೆ ಹುರಿದಿರುವ ಕಾಫಿ ಬೀಜಗಳ ಮೂಲಕ ಆವಿಯನ್ನು ಹಾಯಿಸುವುದರ ಮೂಲಕ ತಯಾರಿಸಲಾಗುತ್ತದೆ. ಸರಿಯಾದ ಎಸ್‌ಪ್ರೆಸ್ಸೋ ಮೇಲ್ಭಾಗದಲ್ಲಿ ದಪ್ಪಗಿನ ಬಂಗಾರದ ಬಣ್ಣ ಹೊಂದಿರುವ ಕೆನೆಯನ್ನು ಹೊಂದಿರುತ್ತದೆ.

ಕ್ಯಾಪಿಚಿನೊ
ಸಾಮಾನ್ಯವಾಗಿ ಹಲವು ಕಾಫಿ ಅಂಗಡಿಗಳಲ್ಲಿ ದೊರೆಯುವ ಮತ್ತೊಂದು ಹೆಚ್ಚು ಪ್ರಸಿದ್ಧ ಹೊಂದಿರುವ ಕಾಫಿ ಇದಾಗಿದೆ. ನಿಜವಾದ ಕ್ಯಾಪಿಚಿನೊವು ಎಸ್‌ಪ್ರೆಸ್ಸೋ, ಕಾಯಿಸಿದ ಹಾಲು ಮತ್ತು ಹಾಲಿನ ನೊರೆಯ ಸಮವಾದ ಸಂಯೋಗವಾಗಿದೆ.

ಕೆಫೆ ಲ್ಹಾಟೆ
ಕೆಫೆ ಲ್ಹಾಟೆ ಎಂದರೆ ಮೂರು ಭಾಗದ ಕಾಯಿಸಿದ ಹಾಲಿಗೆ ಒಂದು ಭಾಗದ ಎಸ್‌ಪ್ರೆಸ್ಸೋದ ಮಿಶ್ರಣವಾಗಿದೆ. ಲ್ಹಾಟೆ ಎಂದರೆ ಇಟಲಿಯನ್‌ನಲ್ಲಿ ‘ಹಾಲು’ ಎಂದರ್ಥ, ಆದ್ದರಿಂದ ರೋಮ್‌ನಲ್ಲಿ ಇದನ್ನು ಆದೇಶಿಸುವಾಗ ಹುಷಾರಾಗಿರಿ.

ಫ್ರ್ಯಾಪ್
ಯೂರೋಪ್ ಮತ್ತು ಲ್ಯಾಟಿನ್ ಅಮೆರಿಕದಲ್ಲಿ ಮೆಚ್ಚಿನದಾಗಿದೆ, ಸಾಮಾನ್ಯವಾಗಿ ಬೇಸಿಗೆ ತಿಂಗಳುಗಳಲ್ಲಿ. ತಣ್ಣನೆಯ ಎಸ್‌ಪ್ರೆಸ್ಸೋವನ್ನು, ಐಸ್‌ನೊಂದಿಗೆ ದೊಡ್ಡ ಲೋಟದಲ್ಲಿ ನೀವು ಬಯಸಿದಲ್ಲಿ ಹಾಲಿನೊಂದಿಗೆ ನೀಡಲಾಗುತ್ತದೆ.

ದಕ್ಷಿಣ ಭಾರತದ ಫಿಲ್ಟರ್ ಕಾಫಿ
ದಕ್ಷಿಣ ಭಾರತದ ಸಾಮಾನ್ಯ ಪಾನೀಯ, ಫಿಲ್ಟರ್ ಕಾಫಿಯನ್ನು ಒರಟಾಗಿ ಪುಡಿ ಮಾಡಿದ, ಮಧ್ಯಮದಿಂದ ದಟ್ಟವಾಗಿ ಹುರಿದ ಕಾಫಿ ಅರೇಬಿಕಾದಿಂದ ಮಾಡಲಾಗುತ್ತದೆ. ಪೀಬೆರ್ರಿ ಬೀಜಗಳು ಹೆಚ್ಚು ಆದ್ಯತೆಯದಾಗಿದೆ. ಇದನ್ನು ನೀಡುವ ಮೊದಲು ಕೆಲವು ಗಂಟೆಗಳ ಕಾಲ ಸಾಂಪ್ರದಾಯಿಕ ಮೆಟಲ್ ಕಾಫಿ ಫಿಲ್ಟರ್‌ನಲ್ಲಿ ತಯಾರಾಗುತ್ತದೆ.

ಇನ್‌ಸ್ಟೆಂಟ್ ಕಾಫಿ (ಅಥವಾ ದ್ರವರೂಪದ ಕಾಫಿ)
ಚಿಮುಕಿಸುವುದರೊಂದಿಗೆ ಘನೀಕರಿಸಿದ ಮತ್ತು ನಂತರ ದ್ರವರೂಪದ ಪುಡಿಯಾಗಿ ಅಥವಾ ಕಾಫಿ ಕಣಗಳಾಗಿ ಪರಿವರ್ತಿಸಿದ, ಇನ್‌ಸ್ಟೆಂಟ್ ಕಾಫಿಯು, ಕಾಫಿಯನ್ನು ತ್ವರಿತವಾಗಿ ಬಯಸುವವರಿಗೆ.

ಮೋಕಾ (ಮೋಕಾಚಿನೊ)
ಚಾಕಲೇಟ್ ಸಿರಪ್ ಅಥವಾ ಪುಡಿ ಸೇರಿಸಿದ ಕ್ಯಾಪಿಚಿನೊ ಅಥವಾ ಕೆಫೆ ಲ್ಹಾಟೆ, ಇದು ವಿಭಿನ್ನ ಮಾರ್ಪಾಟುಗಳೊಂದಿಗೆ ಲಭ್ಯವಿದೆ.

ಬ್ಲ್ಯಾಕ್ ಕಾಫಿ
ಕೇವಲ ಡಿಕಾಕ್ಷನ್, ಜಿನುಗಿಸಿದ ಅಥವಾ ಫ್ರೆಂಚ್ ಪ್ರೆಸ್ ಶೈಲಿಯ ಕಾಫಿಯನ್ನು ಹಾಲು ಇಲ್ಲದೆ ನೇರವಾಗಿ ನೀಡಲಾಗುವುದು.





ಐಸ್‌ಡ್ ಕಾಫಿ
ಸಾಮಾನ್ಯ ಕಾಫಿಯನ್ನು ಐಸ್‌ನೊಂದಿಗೆ ನೀಡುವುದು, ಹಾಗೂ ಕೆಲವು ಬಾರಿ ಹಾಲು ಮತ್ತು ಸಕ್ಕರೆಯೊಂದಿಗೆ ಸಹ ನೀಡಲಾಗುತ್ತದೆ.