ಎದ್ದೇಳಿ ಕಾಫಿಯ ವಾಸನೆಯನ್ನು ಆಸ್ವಾದಿಸಿ
ರಿಚರ್ಡ್ ಲೋಪೆಜ್‌ರಿಂದ ಪೋಸ್ಟ್ ಮಾಡಲಾಗಿದೆ


ನನ್ನ ದಿನವು ಕಾಫಿ ಕಪ್‌ನೊಂದಿಗೆ ಪ್ರಾರಂಭವಾಗುತ್ತದೆ. ಸಾಮಾನ್ಯವಾಗಿ ನಾನು ಪ್ರಯಾಣದಲ್ಲಿರುವಾಗ, ದಿನವನ್ನು ನಾನು ಕಾಫಿಯೊಂದಿಗೆ ಪ್ರಾರಂಭಿಸದಿದ್ದರೆ ಆ ದಿನವು ಸರಿಯಾಗಿ ಇರುತ್ತದೆಯೇ ಎಂದು ನಾನು ಕೆಲವೊಮ್ಮೆ ಯೋಚಿಸುತ್ತೇನೆ. ದೈವವಶಾತ್ ಈ ಪಾನೀಯ ಎಲ್ಲ ಕಡೆಗಳಲ್ಲಿಯೂ ಸಿಗುತ್ತದೆ ಮತ್ತು ಇದನ್ನು ಪಡೆಯಲು ಹೆಚ್ಚು ದೂರ ಹೋಗಬೇಕಾಗಿರುವುದಿಲ್ಲ. ನನಗಿನ್ನೂ ಜ್ಞಾಪಕವಿದೆ, ಕೇರಳಕ್ಕೆ ಹೋಗಿದ್ದಾಗ ಒಮ್ಮೆ ಅದು ಚಳಿಗಾಲದ ಬೆಳಿಗ್ಗೆ ನಾನು ನನ್ನ ಸ್ನೇಹಿತ ಕ್ಯಾಲಿಕಟ್‌ನಿಂದ ತೆಲ್ಲಚೆರಿವರೆಗೂ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದೆವು. ಬೆಳಗಿನ ಜಾವದ ತಣ್ಣಗಿನ ವಾತಾವರಣವು ನಮಗೆ ನಡುಕ ಹುಟ್ಟಿಸಿತ್ತು ಮತ್ತು ನಾವು ಒಂದು ಸಣ್ಣ ಸ್ಥಳೀಯ ರೆಸ್ಟೋರೆಂಟ್ ಬಳಿ ನಿಂತೆವು. ನನ್ನ ಜೊತೆಯಲ್ಲಿದ್ದ, ನನ್ನ ಬಂಧುಗಳಲ್ಲಿ ಒಬ್ಬನಾಗಿದ್ದ ಜಾಬಿ, ಬ್ಲ್ಯಾಕ್ ಕಾಫಿ (ಕಪ್ಪು ಕಾಫಿ)ಯನ್ನು ಸಲಹೆ ಮಾಡಿದ ಮತ್ತು ಅವನ ಸಲಹೆಯನ್ನು ಸ್ವೀಕರಿಸಿದ ನಾನು ಧನ್ಯ. ಅದರ ಕಚ್ಚಾ ರೂಪದ ಈ ಪಾನೀಯವನ್ನು ನಾನು ಇದೇ ಮೊದಲ ಬಾರಿ ರುಚಿ ನೋಡಿದ್ದು, ನನಗೆ ಹಿಡಿಸಿತು.

ನನ್ನ ಆಪ್ತ ಸ್ನೇಹಿತನೊಬ್ಬನು, ಕಾಫಿಯೊಂದಿಗೆ ಪ್ರಯೋಗ ಮಾಡಲು ಪ್ರೀತಿಸುತ್ತಾನೆ. ಅವನು ಅತಿಮಾನುಷವಾದ ಮಿಶ್ರಣಗಳೊಂದಿಗೆ ಪ್ರಯೋಗಿಸುತ್ತಾನೆ ಮತ್ತು ಹೇಗೆಯೋ ಕಾಫಿಯಲ್ಲಿ ಒಂದು ರೀತಿಯ ಹುರುಪು ಪಡೆಯುವಲ್ಲಿ ಯಶಸ್ವಿಯಾಗುತ್ತಾನೆ ಮತ್ತು ನಂಬಲು ಅದನ್ನು ರುಚಿಸಿದರೆ ಮಾತ್ರ ಸಾಧ್ಯ. ಆದಾಗ್ಯೂ, ವಿಭಿನ್ನ ರೀತಿಯಲ್ಲಿ ಕಾಫಿ ಮಾಡುವ ಅವನ ನೈಪುಣ್ಯತೆಯನ್ನು ನಾನು ನಿರಾಕರಿಸಲಿಲ್ಲ, ಎಲ್ಲ ಕಾಫಿ ಪ್ರಿಯರ ಸಲುವಾಗಿ, ನನ್ನ ಆದ್ಯತೆ ಕಪ್ಪು ಕಾಫಿಯೇ ಆಗಿದೆ.