ಕೆಫೆ ಅಥವಾ ಮನೆಯಲ್ಲಿ ಕುಳಿತುಕೊಂಡು ನಿಮ್ಮ ನೆಚ್ಚಿನ ಉತ್ತೇಜಕ ಪಾನೀಯವನ್ನು ಎಷ್ಟು ಬಾರಿ ಸವಿದಿರುವಿರಿ? ಎಣಿಸಲಾರದಷ್ಟು ಇರಬಹುದು. ಆದರೆ ನಿಮ್ಮ ದೈನಂದಿನ ಜೀವನದಲ್ಲಿ ಕಾಲಿರಿಸುವ ಮೊದಲು ಇದು ಎಲ್ಲಿಂದ ಪ್ರಾರಂಭವಾಯಿತು ಎಂಬುದನ್ನು ನೀವು ಎಂದಾದರೂ ಯೋಚಿಸಿರುವಿರಾ?

ಸಾಮಾನ್ಯವಾಗಿ ತಿಳಿದಿರುವಂತೆ ಕಾಫಿ ಗಿಡವನ್ನು ಈಥಿಯೋಪಿಯಾದ ಕಫಾ ಪ್ರಾಂತ್ಯದಲ್ಲಿ ಸುಮಾರು ಕ್ರಿ.ಶ. 600 ರಲ್ಲಿ ಮೊದಲಿಗೆ ಕಂಡುಹಿಡಿಯಲಾಯಿತು. ದಂತಕಥೆಯ ಪ್ರಕಾರ ಇದು ಈಥಿಯೋಪಿಯಾದ ಕಲ್ದಿ ಎಂಬ ಹೆಸರಿನ ಕುರಿ ಮೇಯಿಸುವನೊಬ್ಬ ಒಂದು ದಿನ ಮಧ್ಯಾಹ್ನದ ನಿದ್ರೆಯ ಸಮಯದಲ್ಲಿ, ತನ್ನ ಕುರಿಗಳ ವರ್ತನೆಯಲ್ಲಿ ವಿಶೇಷವಾದ ಬದಲಾವಣೆಯನ್ನು ಗಮನಿಸಿದ. ಕುರಿಯು ಸಹಜವಾಗಿ ಚೆರ್ರಿ ಬಣ್ಣದ ಗಿಡದಲ್ಲಿನ ಕೆಂಪು ಬೀಜಗಳನ್ನು ತಿನ್ನುತ್ತಿತ್ತು, ಇದರಿಂದ ಅದು ಆನಂದದಲ್ಲಿ ನೆಗೆದಾಡುತ್ತಿತ್ತು. ಕಲ್ದಿ ಸಹ ಕೆಲವು ಬೀಜಗಳನ್ನು ಸೇವಿಸಿದಾಗ ಅವನು ಸಹ ಕುರಿಗಳೊಂದಿಗೆ ನೆಗೆದಾಡಲು ಆರಂಭಿಸಿದ.

15 ನೇ ಶತಮಾನದ ಕೊನೆಯ ಹೊತ್ತಿಗೆ ಕಾಫಿಯ ಸುವಾಸನೆಯು ಧಾರ್ಮಿಕ ನಗರ ಮೆಕ್ಕಾವನ್ನು ತಲುಪಿತ್ತು. ಪ್ರಾರಂಭದಲ್ಲಿ ಮಸೀದಿಯಲ್ಲಿ ಕಾಫಿಯು ಸೂಫಿ ಫಕೀರರ ಆದ್ಯತೆಯಾಗಿತ್ತು, ನಂತರ ಅರೇಬಿಯಾದಾದ್ಯಂತ ಕಾಫಿ ಹೆಚ್ಚು ಪ್ರಿಯವಾಯಿತು. ದಂತಕಥೆಯ ಪ್ರಕಾರ, ಈ ಪ್ರಬಲವಾದ ಫಲವತ್ತಾದ ಬೀಜಗಳಾದ, ಕಾಫಿ ಅರೇಬಿಕಾವನ್ನು ಹಲವು ವರ್ಷಗಳ ಕಾಲ ಶ್ರದ್ಧೆಯಿಂದ ಅರಬ್ಬರು ರಕ್ಷಿಸುತ್ತಿದ್ದರು.

17ನೇ ಶತಮಾನದಲ್ಲಿ ಭಾರತದ ಒಬ್ಬ ಸೂಫಿ ಯಾತ್ರಿಕ, ಬಾಬಾ ಬುಡನ್ ಸಮುದ್ರ ಬಂದರು ಮೋಕಾ, ಯೇಮನ್ ಮೂಲಕ ಪ್ರಯಾಣಿಸುವಾಗ ಕಾಫಿಯ ಆನಂದವನ್ನು ಕಂಡುಕೊಂಡನು. ಅವನು ಭಾರತಕ್ಕೆ ಹಿಂತಿರುಗಿದಾಗ, ಅರೇಬಿಯಾದಿಂದ ತಂದಿದ್ದ ಈ ಸಮೃದ್ಧ ಬೀಜಗಳನ್ನು ಚಿಕ್ಕಮಗಳೂರಿನ ಚಂದ್ರಗಿರಿ ಬೆಟ್ಟಗಳಲ್ಲಿ ನಾಟುವಲ್ಲಿ ಯಶಸ್ವಿಯಾದರು.

ಉಳಿದ ವಿಷಯ ಇತಿಹಾಸದಲ್ಲಿರುವಂತೆ. ಕಾಫಿಯ ವಾಣಿಜ್ಯ ಕೃಷಿಯನ್ನು ಪೂರ್ವ ಮತ್ತು ಪಶ್ಚಿಮ ಘಟ್ಟಗಳ ಪರ್ವತ ಶ್ರೇಣಿಗಳಲ್ಲಿ ಬ್ರಿಟಿಷರು 19ನೇ ಶತಮಾನದಲ್ಲಿ ಪ್ರಾರಂಭಿಸಿದರು.

ಆಕಸ್ಮಿಕವಾಗಿ ಕಂಡುಹಿಡಿದ ಬೀಜಗಳಿಂದ ಹಿಡಿದು ಪ್ರಪಂಚದ ಮೊಟ್ಟಮೊದಲ ಪಾನೀಯವಾಗಿ ಕಾಫಿಯು ಖಂಡಗಳಾದ್ಯಂತ ಪ್ರಯಾಣ ಬೆಳೆಸಿ ನಮ್ಮ ಕೈಗಳನ್ನು ಸೇರಿವೆ. ಮೋಕಾ, ಕ್ಯಾಪಿಚಿನೊ, ಫಿಲ್ಟರ್ ಕಾಫಿ, ತಣ್ಣಗಿನ ಕಾಫಿ, ನೀವು ಕರೆಯಲು ಯಾವುದೇ ಆದರೂ ಪರವಾಗಿಲ್ಲ, ಎಂದೆಂದಿಗೂ ಈ ಉತ್ತೇಜನ ಪಾನೀಯವನ್ನು ಸಮವಾದ ಉತ್ತೇಜನದ ಇತಿಹಾಸದೊಂದಿಗೆ ನೀವು ಆಸ್ವಾದಿಸುತ್ತೀರಿ ಎಂಬುದು ನಮಗೆ ಖಚಿತವಾಗಿದೆ.