ಕಾಫಿಯ ಕುರಿತ ಉತ್ತಮ ಸಂಗತಿ ಎಂದರೆ ಇದು ಹೆಚ್ಚು ಪರಿವರ್ತನಶೀಲ. ಕಾಫಿಯಿಂದ ಮನೆಯಲ್ಲಿಯೇ ತಯಾರಿಸಬಲ್ಲಂತಹ ಈ ಕೆಲವು ರೆಸಿಪಿಗಳನ್ನು ಪ್ರಯತ್ನಿಸಿ!

ಹಣ್ಣು ಮತ್ತು ಮಸಾಲೆ
ತಾಜವಾದ ಕಿತ್ತಳೆ ಸಿಪ್ಪೆ, ದಾಲ್ಚಿನ್ನಿ, ಜಾಕಾಯಿ, ಲವಂಗ ಮತ್ತು ಸಾಮಾನ್ಯವಾಗಿ ಬಳಸುವ ಸ್ವಲ್ಪ ಕಾಫಿ ತೆಗೆದುಕೊಳ್ಳಿ. ಎಲ್ಲವನ್ನೂ ಜೊತೆಯಲ್ಲಿ ಮಿಶ್ರಮಾಡಿ ಕಾಯಿಸಿ. ಕಿತ್ತಳೆ ಹಣ್ಣಿನ ತೊಳೆಯನ್ನು ನಿಮ್ಮ ಕಪ್‌ನ ಕೆಳಗೆ ಇರಿಸಿ. ಮಿಶ್ರಣವನ್ನು (ಕಾಫಿ) ಹಾಕಿ, ರುಚಿಗಾಗಿ ಸ್ವಲ್ಪ ಸಕ್ಕರೆ ಮತ್ತು ಕೆನೆಯನ್ನು ಸೇರಿಸಿ. ಅಗತ್ಯವಿದ್ದಲ್ಲಿ ಕೆನೆ ಜಾಕಾಯಿ ಮತ್ತು ದಾಲ್ಚಿನ್ನಿಗಳೊಂದಿಗೆ ಮೇಲಿರಿಸಿ. ವಾಹ್! ನಿಮ್ಮ ಮಸಾಲೆ ಕಿತ್ತಳೆ ಸಿದ್ಧವಾಗಿದೆ.

ಆರ್ಟಿಕ್ ಬ್ಲ್ಯಾಸ್ಟ್
ಬಿಸಿಯಾದ ಕಾಫಿ ಮತ್ತು ಚಾಕಲೇಟ್ ಸಿರಪ್ ಅನ್ನು ಅದು ಮೃದುಗೊಳ್ಳುವವರೆಗೆ ಬ್ಲೆಂಡರ್‌ನಲ್ಲಿ ಮಿಶ್ರಣಮಾಡಿ. ಒಂದು ಮಧ್ಯಗಾತ್ರದ ಪಾತ್ರೆಯಲ್ಲಿ ಹಾಕಿ. ಮಿಶ್ರಣವನ್ನು ಕೊಠಡಿ ತಾಪಮಾನಕ್ಕೆ ತಣ್ಣಗಾಗಿಸಿ. ಮೃದುವಾದ ಐಸ್ ಕ್ರೀಮ್ ಮತ್ತು ತಣ್ಣಗಿನ ಕಾಫಿ ಸೇರಿಸಿ. ಮೃದುವಾಗುವವರೆಗೆ ಬೀಟರ್‌ನಲ್ಲಿ ತಿರುಗಿಸಿ. ದೊಡ್ಡ ಲೋಟಗಳಲ್ಲಿ ಹಾಕಿ ಮತ್ತು ತಕ್ಷಣ ಸೇವಿಸಿ. ಊಊ... ಸಂಪೂರ್ಣ ತಣ್ಣಗಾಯಿತಲ್ಲವೇ?

ವೆನಿಲಾ ಐಸ್ ಕಾಫಿ
ಕಾಫಿ, ಹಾಲು, ಸಕ್ಕರೆ ಮತ್ತು ವೆನಿಲಾವನ್ನು ಮಿಶ್ರಣಮಾಡಿ ಚನ್ನಾಗಿ ಕಲಕಿ, ತಣ್ಣಗಾಗಿಸಿ. ವೆನಿಲಾ ಐಸ್ ಕ್ರೀಮ್ ಅನ್ನು ದೊಡ್ಡ ಪಾತ್ರೆಯಲ್ಲಿರಿಸಿ. ಸ್ವಲ್ಪ ಕಲಕುತ್ತಾ, ಕಾಫಿ ಮಿಶ್ರಣವನ್ನು ಐಸ್ ಕ್ರೀಮ್‌ನ ಮೇಲೆ ಹಾಕಿ. ಕೆನೆ, ಜಾಕಾಯಿಯನ್ನು ಮೇಲಿರಿಸಿ ತದನಂತರ ಸೇವಿಸಿ.