ಪ್ರತಿನಿತ್ಯ, ಪ್ರಪಂಚದಾದ್ಯಂತ ಲಕ್ಷಗಟ್ಟಲೆ ಯುವ ಹಾಗೂ ಹಿರಿಯರು ತಮ್ಮ ದಿನವನ್ನು ಬಿಸಿಬಿಸಿ ಕಾಫಿ ಕಪ್‌ನೊಂದಿಗೆ ಪ್ರಾರಂಭಿಸುತ್ತಾರೆ. ಆದರೆ ಹಲವಾರು ಮೋಹಕ ಪೇಯಗಳು ತೃಪ್ತಿಪಡಿಸುವಂತೆ, - "ಇದು ನಿಜವಾಗಿಯೂ ನನಗೆ ಒಳ್ಳೆಯದೇ?" ಎಂದು ನಾವು ಪ್ರಶ್ನಿಸುತ್ತೇವೆ.

ಈ ಸಂದಿಗ್ಧತೆಯು ನಮ್ಮ ಆರೋಗ್ಯ ಮತ್ತು ಒಳಿತಿಗೆ ಕಾಫಿ ಮತ್ತು ಅದರ ಪರಿಣಾಮಗಳ ಕುರಿತು ಎಣಿಸಲಾರದಷ್ಟು ಸಂಶೋಧನೆಗಳಿಗೆ ಕಾರಣವಾಗಿವೆ. ನೀವು ಆಶ್ಚರ್ಯಗೊಳ್ಳಲಿರುವಿರಿ, ಕೆಲವು ಫಲಿತಾಂಶಗಳು ಸ್ಪಷ್ಟವಾಗಿ ತಿಳಿಸುತ್ತವೆ, ಕಾಫಿಯನ್ನು ಮಿತಿಯಾಗಿ ಸೇವಿಸುವುದರಿಂದ (ದಿನಕ್ಕೆ 4/5 ಕಪ್‌ಗಳವರೆಗೆ) ಯಾವುದೇ ಅಪಾಯವನ್ನುಂಟು ಮಾಡುವುದಿಲ್ಲ ಬದಲಿಗೆ ಇದರಿಂದ ಕೆಲವು ಆರೋಗ್ಯ ಸುಧಾರಣೆಗಳು ಸಾಧ್ಯವಾಗುತ್ತದೆ.

ಸಹಜ ಮನೋಸ್ಥಿತಿ ವರ್ಧಕ, ಕ್ಷಣಾರ್ಧಗಳಲ್ಲಿ "ಅದ್ಭುತ" ಎಂಬ ಅನುಭವವನ್ನುಂಟುಮಾಡಲು ಕಾಫಿ ನಿಮಗೆ ಸಹಾಯ ಮಾಡುತ್ತದೆ. ಕಾಫಿ ಕುಡಿಯುವವರು ಹೆಚ್ಚು ಸಂತುಷ್ಟತೆಯನ್ನು ಅನುಭವಿಸುತ್ತಾರೆ ಮತ್ತು ಅವರು ತಮ್ಮ ಕೆಲಸದಲ್ಲಿ ಹೆಚ್ಚು ತಲ್ಲೀನರಾಗಿರುತ್ತಾರೆ ಎಂದು ಸಂಶೋಧನೆಗಳು ತಿಳಿಸುತ್ತವೆ. ಕಾಫಿಯಲ್ಲಿನ ಕೆಫೇನ್ ಎಚ್ಚರಿಕೆ ಹಂತಗಳನ್ನು ಮತ್ತು ಏಕಾಗ್ರತೆಯನ್ನು ವೃದ್ಧಿಸುವಲ್ಲಿ ಸಹಾಯ ಮಾಡುತ್ತದೆ - ಈ ಮೂಲಕ ಕಾರ್ಯನಿರ್ವಹಣೆ ಮತ್ತು ಮನಃಸ್ಥಿತಿಯನ್ನು ಅಭಿವೃದ್ಧಿಪಡಿಸುತ್ತದೆ.

ವ್ಯಾಪಕವಾಗಿ ಗೌರವಿಸುವಂತಹ ಇಂತಹ ಪ್ರಯೋಜನಗಳನ್ನು ಹೊರತುಪಡಿಸಿ ಇತರ ಆತಿಥ್ಯವೂ ಇದೆ:
ಮೆದುಳಿನ ಕಾರ್ಯನಿರ್ವಹಣೆಯನ್ನು ಹೆಚ್ಚಿಸಲು, ಕೆಲಸದಲ್ಲಿನ ನಿರುತ್ಸಾಹ ಮತ್ತು ‘ಪ್ರಯಾಣದ ಸುಸ್ತ’ ನ್ನು ದೂರವಿರಿಸಲು, ಒಂದು ಕಾರ್ಯಶೀಲ ಪ್ರತ್ಯುತ್ಕರ್ಷಣಕಾರಿ, ಲಿವರ್‌ನ ಕಾರ್ಯವನ್ನು ವೃದ್ಧಿಸುತ್ತದೆ, ಪಾರ್ಕಿನ್ಸನ್ ಕಾಯಿಲೆಯ ಅಪಾಯವನ್ನು ಕಡಿಮೆ ಮಾಡುತ್ತದೆ. ಸಕ್ಕರೆ ಕಾಯಿಲೆ ಮತ್ತು ಕ್ಯಾನ್ಸರ್ ಸಹ.

ನಿಮ್ಮ ನೆಚ್ಚಿನ ಪಾನೀಯದ ಕಪ್‌ನಲ್ಲಿ ತೃಪ್ತಿಹೊಂದಲು ಇನ್ನಷ್ಟು ಹೆಚ್ಚಿನ ಕಾರಣಗಳು ಬೇಕೆ?