ನಿಮ್ಮ ಕಾಫಿಯೊಂದಿಗೆ ನೀವು ಆಸ್ವಾದಿಸುವುದಕ್ಕಿಂತ ಇನ್ನಷ್ಟು ಹೆಚ್ಚಿನ ವಿಷಯಗಳಿವೆ. ಹಲವು ಶತಮಾನಗಳಿಂದ, ಕಾಫಿಗೆ ಹಲವು ಸಂಸ್ಕೃತಿಗಳು ಮತ್ತು ಜೀವನಶೈಲಿಗಳು ತಮ್ಮ ಸ್ಥಳೀಯ ಸ್ವಾದದೊಂದಿಗೆ ಸೇರಿಕೊಂಡಿವೆ ಹಾಗೂ ಇದೀಗ ಇದನ್ನು ಸ್ಥಳೀಯ ಆತಿಥೇಯ ಮತ್ತು ಪ್ರಪಂಚದಾದ್ಯದಿಂದ ಅಂತಾರಾಷ್ಟ್ರೀಯ ಸೊಬಗಿನೊಂದಿಗೆ ಸವಿಯಲಾಗುತ್ತಿದೆ.
ಫ್ರೆಂಚರು ತಮ್ಮ ಬೆಳಗಿನ ಉಪಹಾರದ ಕಾಫಿಯನ್ನು ಕ್ರೊಸೆಂಟ್ಸ್‌ನೊಂದಿಗೆ ಸವಿಯಲು ಇಷ್ಟಪಡುತ್ತಾರೆ; ಇಟಲಿಯವರು ಅವರ ಬಿಸ್ಕೊಟ್ಸ್‌ನೊಂದಿಗೆ ಸವಿಯುತ್ತಾರೆ, ಭಾರತದಲ್ಲಿ ಇಡ್ಲಿ-ವಡೆ, ದೋಸೆ, ಬಿಸಿಬಿಸಿ ಸಮೋಸ ಮತ್ತು ಬಜ್ಜಿಗಳೊಂದಿಗೆ ಕಾಫಿಯನ್ನು ಹೊರತುಪಡಿಸಿ ಬೇರೆ ಯಾವುದೂ ಸರಿಹೊಂದುವುದಿಲ್ಲ ಎಂದು ಹೇಳುತ್ತಾರೆ! ವಿವಿಧ ತಿನಿಸುಗಳೊಂದಿಗೆ ಹೊಂದುವಂತಹ ವಿವಿಧ ಬಗೆಯ ಬೀಜಗಳನ್ನು ಸಹ ಕಾಫಿ ರಸಿಕರು ಗೊತ್ತುಪಡಿಸಬಲ್ಲವರಾಗಿದ್ದಾರೆ!


